ಶರಭೇಶ್ವರ ಶಿಕ್ಷಣ ಮಹಾವಿದ್ಯಾಲಯ
ಶರಭೇಶ್ವರ ವಿದ್ಯಾಪೀಠ ಅಡಿಯಲ್ಲಿ ಸ್ಥಾಪನೆಯಾದ ಶರಭೇಶ್ವರ ಶಿಕ್ಷಣ ಮಹಾವಿದ್ಯಾಲಯ(ಬಿ.ಎಡ್) ಕಳೆದ ಅನೇಕ ವರ್ಷಗಳಿಂದ ಗುಣಮಟ್ಟದ ಶಿಕ್ಷಕರನ್ನು ತಯಾರಿಸಿ ಸದೃಢವಾದ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
ಶರಭೇಶ್ವರ ವಿದ್ಯಾಪೀಠದಡಿಯಲ್ಲಿ ಸುಮಾರು 30 ವರ್ಷಗಳಿಂದ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಈ ಭಾಗದ ನಾಗರೀಕರಿಗೆ ಗುಣಮಟ್ಟದ ಶಿಕ್ಷಣ ಸೇವೆಯನ್ನು ಒದಗಿಸುತ್ತಾ ಬರುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅನುದಾನಿತ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಹಾಗೂ ಅನುದಾನರಹಿತ ನರ್ಸಿಂಗ್, ಪದವಿ ಹಾಗೂ ಬಿ.ಎಡ್ ಕಾಲೇಜ್‌ಗಳು ಶಿಕ್ಷಣ ಸೇವೆಯಲ್ಲಿ ನಿರತವಾಗಿವೆ.
ಕಳೆದ ಅನೇಕ ವರ್ಷಗಳಿಂದ *ಶರಭೇಶ್ವರ ಶಿಕ್ಷಣ ಮಹಾವಿದ್ಯಾಲಯವು ಶಿಕ್ಷಕರನ್ನು ತಯಾರುಗೊಳಿಸುವ ಜೊತೆಗೆ ಸಾಮಾನ್ಯ ಜ್ಞಾನ, ಸಿ.ಇ.ಟಿ, ಟಿ.ಇ.ಟಿ, ಹಾಗೂ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನು ನೀಡಿ, 21ನೇ ಶತಮಾನಕ್ಕೆ ಅವಶ್ಯಕತೆವಿರುವ ಜ್ಞಾನ ಹಾಗೂ ತಂತ್ರಜ್ಞಾನ ವನ್ನು ಬೆಳೆಸಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ವರ್ಧಿಸಲು ತಯಾರುಗೊಳಿಸಲು ಶ್ರಮಿಸುತ್ತಿದೆ.
ಪ್ರತಿವರ್ಷ ಬಿ.ಎಡ್ ಕಾಲೇಜ್ ನಲ್ಲಿ ಪಠ್ಯ ಚಡುವಟಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಂಗೀತ ಸ್ಪರ್ಧೆ, ರಂಗೋಲಿ ಸ್ಪರ್ಧೆ, ರಸ ಪ್ರಶ್ನೆ ಕಾರ್ಯಕ್ರಮ, ಕ್ವಿಜ್ ಕಾರ್ಯಕ್ರಮ, ಡ್ಯಾನ್ಸ್ ಕಾಂಪಿಟೇಷನ್, ನಾಟಕ, ಸ್ಕಿಟ್, ವಾಲಿಬಾಲ್ ಹಾಗೂ ಥ್ರೋಬಾಲ್ ಸ್ವರ್ಧೆಗಳನ್ನು ಕೈಗೊಂಡು ಪ್ರತಿಯೊಬ್ಬ ಭಾವಿ ಶಿಕ್ಷಕರಲ್ಲೂ ಕ್ರೀಡಾ ಮನೋಭಾವನೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
ಇದರ ಜೊತೆಗೆ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಜೀವನ ಕೌಶಲ್ಯ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ, ಹಾಗೂ ಕ್ಷೇತ್ರ ಅಧ್ಯಯನ, ಶೈಕ್ಷಣಿಕ ಪ್ರವಾಸ ವನ್ನು ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತದೆ.
No comments:
Post a Comment